Site icon Kannada Sakshi | Kannada News | ಕನ್ನಡ ಸುದ್ದಿ | Latest Karnataka News

K N Rajanna Statement | ಸಿದ್ದರಾಮಯ್ಯ 5 ವರ್ಷ ಸಿಎಂ ಆಗಬೇಕೆಂಬುದು ನನ್ನ ಆಶಯ..!

ತುಮಕೂರು | ಸಿಎಂ ಸಿದ್ದರಾಮಯ್ಯ ಅವರಂತೆ ನಾನೂ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಬೇಕೆಂಬ ಆಶಯ ಹೊಂದಿದ್ದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ (K N Rajanna Statement) ತುಮಕೂರಿನಲ್ಲಿ ನೀಡಿದ ಹೇಳಿಕೆಯಿಂದ ರಾಜಕೀಯ ಚರ್ಚೆಗೆ ಹೊಸ ಬಣ್ಣ ನೀಡಿದಂತಾಗಿದೆ.

ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ (K N Rajanna Statement) ಕೆ ಎನ್ ರಾಜಣ್ಣ

ಸಿಎಂ ಬದಲಾವಣೆಯ ಕುರಿತು ಮಾತನಾಡಿದ ರಾಜಣ್ಣ (K N Rajanna Statement), ಸಿದ್ದರಾಮಯ್ಯ ಅವರೇ ನಮ್ಮ ಸಿಎಂ. ಬದಲಾವಣೆ ಬೇಕಾದರೆ ಹೈಕಮಾಂಡ್ ಅಥವಾ ಶಾಸಕರ ನಿರ್ಧಾರವೇ ಅಂತಿಮ. ಆದರೆ ಶಾಸಕರು ಬದಲಾವಣೆ ಮಾಡುವ ತೀರ್ಮಾನದಲ್ಲಿಲ್ಲ ಮತ್ತು ಹೈಕಮಾಂಡ್ ಕೂಡ ಬದಲಾವಣೆಗೆ ಒಪ್ಪುತ್ತಿಲ್ಲ ಅನ್ನೋ ಭಾವನೆ ನನ್ನದಾಗಿದೆ ಎಂದಿದ್ದಾರೆ.

ಮುಖ್ಯಮಂತ್ರಿಗಳು ಕೇಂದ್ರ ಸಚಿವರನ್ನು ಭೇಟಿಯಾಗುವುದೆಂದರೆ, ಅದು ರಾಜ್ಯದ ಹಿತಕ್ಕಾಗಿ. ಪಕ್ಷದ ಮುಖಂಡರನ್ನು ಭೇಟಿಯಾಗುವುದು ಸಹ ವಾಡಿಕೆಯಾಗಿದ್ದು, ಇದರಲ್ಲಿ ವಿಶೇಷ ಅರ್ಥ ಹುಡುಕುವುದು ಅರ್ಥವಿಲ್ಲ ಎಂದು ರಾಜಣ್ಣ ಪ್ರತಿಕ್ರಿಯಿಸಿದರು.

ಒಮ್ಮೆ ಎಐಸಿಸಿ ಅಧ್ಯಕ್ಷರು ಸಹಿ ಹಾಕಿದ ಪಟ್ಟಿ ಹೊರಬಂದರೆ ಅದು ಅಂತಿಮ. ಕೆಲವರು ಒಪ್ಪಬಹುದು, ಕೆಲವರು ಒಪ್ಪದೆ ಇರಬಹುದು, ಆದರೆ ನಂತರ ಅದನ್ನು ಬದಲಿಸುವ ಪ್ರಯತ್ನ ಅಶಿಸ್ತು ಮತ್ತು ಅರ್ಥಹೀನ  ಎಂದಿದ್ದಾರೆ.

ಇದನ್ನು ಓದಿ : Delhi Earthquake | ಸತತ ಎರಡನೇ ದಿನವೂ ಭೂಕಂಪ ; ದೆಹಲಿಗೆ ತಟ್ಟಿದ ಬಿಸಿ..!

ಡಿಕೆ ಶಿವಕುಮಾರ್ ಅವರ ಭೇಟಿ ರಾಜಕೀಯದ ಅಂಗವಷ್ಟೆ. ಅವರು ಡಿಸಿಎಂ ಆಗಿರಲಿ ಅಥವಾ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿರಲಿ, ಪಕ್ಷದ ವರಿಷ್ಠರನ್ನು ಭೇಟಿಯಾಗುವುದು ಸಾಮಾನ್ಯ ಎಂದು ರಾಜಣ್ಣ (K N Rajanna Statement) ಅಭಿಪ್ರಾಯಪಟ್ಟಿದ್ದಾರೆ.

ಅವರು ವೈಯಕ್ತಿಕ ಕಾರ್ಯಕ್ರಮಗಳಿಗಾಗಿ ಬಂದಿದ್ದರು. ಅದನ್ನು ರಾಜಕೀಯವಾಗಿ ಅರ್ಥೈಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ. ಸುರ್ಜೆವಾಲಾ ನಡೆಸಿದ ಅಭಿಪ್ರಾಯ ಸಂಗ್ರಹದ ಬಗ್ಗೆ ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನೋಣವಿನಕೆರೆ ಸ್ವಾಮೀಜಿ ಡಿಕೆಶಿಗೆ ಬೆಂಬಲದ ಕುರಿತು ಮಾತನಾಡಿದ ಅವರು, ಸ್ವಾಮೀಜರು ಅಭಿಪ್ರಾಯ ಹೇಳುವುದು ಸಹಜ. ಅವರು ಡಿಕೆಶಿಗೆ ಬೆಂಬಲ ನೀಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಇದು ಸಾಮಾನ್ಯ. ಇದರಲ್ಲಿ ತಪ್ಪು ಹುಡುಕುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

Exit mobile version