Site icon Kannada Sakshi | Kannada News | ಕನ್ನಡ ಸುದ್ದಿ | Latest Karnataka News

KSRTC Accident | ಮಗುವಿನ ಜನನ ಪ್ರಮಾಣ ಪತ್ರ ತರಲು ಹೋಗಿ ಸಾವು ತಂದು ಕೊಂಡ ಯುವಕ

ತುಮಕೂರು | ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಮೂಕನಹಳ್ಳಿ ಗ್ರಾಮದ ನಿವಾಸಿಯಾದ ಗ್ರಾಮ ಲೆಕ್ಕಾಧಿಕಾರಿ ಮಹೇಶ್ (25) ಅವರು ಹೆಗ್ಗೆರೆ ಬಳಿ ಭೀಕರ ರಸ್ತೆ (KSRTC Accident) ಅಪಘಾತದಲ್ಲಿ ಮೃತಪಟ್ಟ ದುಃಖದ ಘಟನೆ ನಡೆದಿದೆ.

ಸಚಿವ ಡಾ. ಜಿ ಪರಮೇಶ್ವರ್ ಮನೆ ಮುಂದೆ ನಡೆದ (KSRTC Accident) ಅಪಘಾತ

ಮಹೇಶ್ ಅವರು ತುಮಕೂರಿನಿಂದ ತಮ್ಮ ಹೆಣ್ಣುಮಗಳ ಜನನ ಪ್ರಮಾಣಪತ್ರವನ್ನು ಪಡೆದುಕೊಂಡು  ಮರಳಿ ಊರಿಗೆ ಹೋಗುವಾಗ, ಎದುರುಗಡೆಯಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಅವರ ಬೈಕ್‌ಗೆ ರಭಸದಿಂದ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಮಾಹಿತಿ.

ಅಪಘಾತ ಸಂಭವಿಸಿದ ಸ್ಥಳವು ತುಮಕೂರು ಹೊರವಲಯದ ಹೆಗ್ಗೆರೆಯ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ನಿವಾಸದ ಹತ್ತಿರದಲ್ಲಿದೆ. ಈ ಪ್ರದೇಶದ ರಸ್ತೆಯಲ್ಲಿ ವಾಹನಗಳ ಅತಿವೇಗ ಹಾಗೂ ತಿರುವುಗಳನ್ನು ಸರಿಯಾಗಿ ನಿರ್ವಹಿಸದಿರುವುದು ಅಪಘಾತಕ್ಕೆ ಕಾರಣವೆನ್ನಲಾಗುತ್ತಿದೆ.

ಇದನ್ನು ಓದಿ : Koratagere News | ಕಾಡು ಪ್ರಾಣಿ ಬೇಟೆಯಾಡಲು ಹೋಗಿ ಬೇಟೆಯಾದ ಬೇಟೆಗಾರ

ಮಹೇಶ್‌ ಪತ್ನಿ 15 ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರಿಂದ, ಕುಟುಂಬದಲ್ಲಿ ಸಂತೋಷದ ವಾತಾವರಣವಿತ್ತು. ಆದರೆ ಈಗ ಏಕಾಏಕಿ ಈ ದುರಂತದಿಂದ (KSRTC Accident) ಕುಟುಂಬವೇ ಶೋಕಸಾಗರದಲ್ಲಿ ಮುಳುಗಿದೆ. ಕೇವಲ 25 ವರ್ಷದ ಈ ಯುವ ಅಧಿಕಾರಿಯ ಬದುಕು ಸಿಡಿಲಿನಂತೆ ಕೊನೆಗೊಂಡಿದೆ.

ಈ ಕುರಿತು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಾಹನ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದಲ್ಲಿ ತನಿಖೆ ಮುಂದುವರೆದಿದೆ.

Exit mobile version