Site icon Kannada Sakshi | Kannada News | ಕನ್ನಡ ಸುದ್ದಿ | Latest Karnataka News

Rohini Sindhuri | ತುಮಕೂರು ಕಾರ್ಮಿಕ ಇಲಾಖೆಗೆ ದಿಢೀರ್ ಭೇಟಿ ನೀಡಿದ ರೋಹಿಣಿ ಸಿಂಧೂರಿ

ತುಮಕೂರು | ಕಾರ್ಮಿಕ ಇಲಾಖೆ ಆಯುಕ್ತೆ ರೋಹಿಣಿ ಸಿಂಧೂರಿ (Rohini Sindhuri) ಅವರು ತುಮಕೂರು ನಗರದಲ್ಲಿರುವ ಕಾರ್ಮಿಕ ಇಲಾಖೆ ಕಚೇರಿಗೆ ಇಂದು ದಿಢೀರ್ ಭೇಟಿ ನೀಡಿದ್ದು, ಸ್ಥಳೀಯ ಅಧಿಕಾರಿಗಳೊಂದಿಗೆ ವಿವಿಧ ವಿಷಯಗಳ ಕುರಿತು ಸಭೆ ನಡೆಸಿದರು.

ರೋಹಿಣಿ ಸಿಂಧೂರಿ (Rohini Sindhuri) ಬಳಿ ಕಾರ್ಮಿಕ ಇಲಾಖೆ ಸಮಸ್ಯೆ ಹೇಳಿಕೊಂಡ ಸಾರ್ವಜನಿಕರು

ಈ ಭೇಟಿಯ ವೇಳೆ ಸಾರ್ವಜನಿಕರಿಂದ ಹಾಗೂ ದಲಿತ ಮುಖಂಡ ಮಾರಣ್ಣ ಪಾಳೇಗಾರ್ ಅವರ ನೇತೃತ್ವದ ತಂಡದಿಂದ ಹಿಂದಿನ ಕಾರ್ಮಿಕ ಅಧಿಕಾರಿ ತೇಜೋವತಿ ವಿರುದ್ಧ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ, ತೇಜೋವತಿ ಅವರು ಅಕ್ರಮವಾಗಿ ಕೋಟಿ ಕೋಟಿ ಹಣ ಸಂಪಾದಿಸಿದ್ದಾರೆ ಎಂಬ ಗಂಭೀರ ಆರೋಪ ಮಾಡಿದರು. ಅವರು ಇದೀಗ ಮತ್ತೆ ತುಮಕೂರಿಗೆ ವಾಪಸ್ ಬರುವ ಯತ್ನ ಮಾಡುತ್ತಿರುವುದನ್ನು ತಡೆಗಟ್ಟಬೇಕು ಎಂಬ ಆಗ್ರಹವನ್ನು ಕೂಡ ಮಾಡಿದರು.

ಮಾರಣ್ಣ ಪಾಳೇಗಾರ್ ಅವರು ಪತ್ರಿಕಾ ಪ್ರತಿನಿಧಿಗಳೊಂದಿಗೆ ಮಾತನಾಡಿ, ತೇಜೋವತಿ ಮತ್ತೆ ತುಮಕೂರಿಗೆ ಬಂದರೆ, ನಾವು ಉಗ್ರ ಹೋರಾಟ ಕೈಗೆತ್ತಿಕೊಳ್ಳುತ್ತೇವೆ. ಪರಮೇಶ್ವರ್ ಮತ್ತು ಜಿಲ್ಲಾಧಿಕಾರಿಗಳ ಮುಂದೆ ಗಾಂಧೀಜಿ ಶೈಲಿಯಲ್ಲಿ ಪ್ರತಿಭಟನೆ ನಡೆಸಲು ಸಿದ್ಧರಾಗಿದ್ದೇವೆ ಎಂದು ಎಚ್ಚರಿಸಿದರು.

ಇದನ್ನು ಓದಿ : Yettinahole Project | ಎತ್ತಿನಹೊಳೆ ಯೋಜನೆ ಕಾಮಗಾರಿಗೆ ಬಿಗ್ ಶಾಕ್ ಕೊಟ್ಟ ಕೇಂದ್ರ ಸರ್ಕಾರ..!

ನಾನು ಸಾರ್ವಜನಿಕರ ಪರ ನಿಂತಾಗ ತೇಜೋವತಿ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿ ‘ಆಚೆ ತಳ್ತಿನಿ’ ಎಂದು ಬೆದರಿಕೆ ಹಾಕಿದರು ಎಂದು ದೂರಿದರು.

ರೋಹಿಣಿ ಸಿಂಧೂರಿ (Rohini Sindhuri) ಅವರು ಈ ಎಲ್ಲಾ ಮನವಿಗಳನ್ನು ಗಮನಪೂರ್ವಕವಾಗಿ ಸ್ವೀಕರಿಸಿದ್ದು, ಅಧಿಕಾರಿಗಳಿಂದ ವಿವರಣೆ ಕೇಳುವುದಾಗಿ ತಿಳಿಸದರು. ತೇಜೋವತಿ ವಿರುದ್ಧ ಮುಂದಿನ ಕ್ರಮಕ್ಕಾಗಿ ಇಲಾಖಾ ಮಟ್ಟದಲ್ಲಿ ಸಭೆಗಳು ನಡೆಯುವ ನಿರೀಕ್ಷೆಯಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕರ ಆರೋಪ ಹಾಗೂ ಹೋರಾಟಗಳನ್ನು ತಡೆಹಿಡಿಯುವುದು ಅಧಿಕಾರಿಗಳ ಹೊಣೆಗಾರಿಕೆಯಾಗಿದೆ ಎಂಬ ಪ್ರಶ್ನೆ ಇನ್ನು ಮುಂದೆ ಹೆಚ್ಚು ಚರ್ಚೆಗೆ ಒಳಗಾಗುವ ಸಾಧ್ಯತೆಯಿದೆ.

Exit mobile version